ಹೇಮರಾಜ್ ಕರ್ಕೇರ, ಒಬ್ಬ ಪತ್ರಕರ್ತರು. 'ಛಾಯಾಕಿರಣ' ವೆಂಬ ಕನ್ನಡ ಮಾಸಿಕದಿಂದ ಹೆಸರುವಾಸಿಯಾಗಿದ್ದಾರೆ. ಅವರನ್ನು 'ಮಾಧ್ಯಮಶ್ರೀ ಪ್ರಶಸ್ತಿ' ಆಯ್ಕೆಮಾಡಲಾಗಿದೆ. ಹೊರನಾಡು, ಮುಂಬಯಿನಲ್ಲಿ ೩ ದಶಕಗಳ ಅನುಭವಿ. == ಜನನ, ವಿದ್ಯಾಭ್ಯಾಸ == ಕಕ್ಷಿಣ ಕನ್ನಡ ಜಿಲ್ಲೆಯ 'ಕಾಪು', 'ಪೊಲಿಪು', ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಕರ್ಕೇರ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಕರ್ಕೇರ ದಂಪತಿಗಳ ಪುತ್ರನಾಗಿ ಜನಿಸಿದರು. ಉಡುಪಿಯ ಎಂ.ಜಿ.ಎಂ.ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರು ಪಾಲಿಟೆಕ್ನಿಕ್ ನಲ್ಲಿ ಶಿಕ್ಷಣ ಮುಂದುವರೆಸಿದರು. ವೃತ್ತಿಗೋಸ್ಕರ ಮುಂಬಯಿನಗರಕ್ಕೆ ಬಂದರು. ಪತ್ರಿಕಾರಂಗದಲ್ಲಿ ಕೆಲಸ ಮಾಡಿದರು. == ಪ್ರಸರಣಾಧಿಕಾರಿಯಾಗಿ == ಎಂ. ಮಲ್ಲಿಕಾರ್ಜುನಯ್ಯನವರು ಪೋಲೀಸ್ ನ್ಯೂಸ್, ಕರ್ನಾಟಕ ಮಲ್ಲ ಎಂಬ ಪತ್ರಿಕೆಗಳನ್ನು ಹುಟ್ಟುಹಾಕಿ ನಡೆಸುತ್ತಿದ್ದ ಸಮಯದಲ್ಲಿ ಪ್ರಸರಣಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ತಾವು ಗಳಿಸಿದ ಅನುಭವದ ಸಹಾಯದಿಂದ ನಗರದಲ್ಲಿ ಉದಯ ದೀಪವೆಂಬ ಪತ್ರಿಕೆಯನ್ನು ಒಬ್ಬ ಗೆಳೆಯನ ನೆರವಿನಿಂದ ಪ್ರಾರಂಭಿಸಿದರು. ಮುಂಬಯಿನಗರದ ವರದಿಗಳನ್ನು ಕನ್ನಡದಲ್ಲಿ ಸಂಪಾದಿಸಿ, ಪ್ರಕಟಿಸುತ್ತಿದ್ದರು. == ಹೇಮರಾಜರ ಪರಿವಾರ == ಹೇಮರಾಜ್ ತಮ್ಮ ಪತ್ನಿ, ಸುಪ್ರೀತಾ ಹೇಮರಾಜ್ ಮತ್ತು ಮಗ ಪ್ರಥಮರಾಜ್, ಜೊತೆಯಲ್ಲಿ ಮುಂಬಯಿನಲ್ಲಿ ವಾಸಿಸುತ್ತಿದ್ದಾರೆ. == ಮುಂಬಯಿನ್ಯೂಸ್ == ಹೇಮರಾಜರು, ಮುಂಬಯಿ ಮಹಾನಗರದ ವಿದ್ಯುನ್ಮಾದ ದೃಷ್ಯವಾಹಿನಿ 'ಮುಂಬಯಿ ನ್ಯೂಸ್ ವಾಹಿನಿ'ಯನ್ನು ನಡೆಸುತ್ತಿದ್ದಾರೆ. ಹೇಮರಾಜರನ್ನು ಮುಂಬಯಿಯಲ್ಲಿ ಸನ್ಮಾನಿಸಲಾಗಿತ್ತು == ಸನ್ಮಾನ == ಮುಂಬಯಿ ಮಹಾನಗರದ ಪತ್ರಿಕೋದ್ಯಮದಲ್ಲಿ ೩ ದಶಕಗಳ ಸೇವೆಸಲ್ಲಿಸಿದ 'ಹೇಮರಾಜ್ ಕರ್ಕೇರ' ಹಾಗೂ ಐದು ಸಾಧಕರನ್ನು ಗೌರವಿಸಲಾಯಿತು. , ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರರನ್ನು "ಮಾಧ್ಯಮಶ್ರೀ ಗೌರವ"ಕೊಟ್ಟು ಪುರಸ್ಕರಿಸಲಾಯಿತು. , == ಉಲ್ಲೇಖಗಳು ==